Thursday 23 May 2024

Hello Maths Games


ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ
Download


***************************************
ಆಟ ಆಡುವ ವಿಧಾನ:

1. 1 ರಿಂದ 100 ರವರೆಗೆ ಚೌಕ ಅಥವಾ ಮನೆಗಳನ್ನು ಹೊಂದಿರುವ ಈ ಆಟ ನಮಗೆಲ್ಲಾ ಪರಿಚಿತವಾಗಿರುವ ಹಾವು ಏಣಿ ಆಟದ ಹಾಗೆಯೇ ಇದೆ.

2. ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ಜನರು ಇದನ್ನು ಆಡಬಹುದು. ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ ತಲಾ ಒಂದೊAದು ಕಾಯಿಯನ್ನು ತೆಗೆದುಕೊಳ್ಳಬೇಕು. ಅವು ಬಣ್ಣಬಣ್ಣದ ರಬ್ಬರ್‌ಗಳು, ಬೀಜಗಳು, ಪರಸ್ಪರ ವಿಭಿನ್ನವಾಗಿ ಗುರುತಿಸಲು

 ಅನುವಾಗುವಂತೆ ಬೇರೆಬೇರೆ ವಿಧದ ಬಟನ್‌ಗಳು, ಚಿಕ್ಕಚಿಕ್ಕ ಕಲ್ಲಿನ ಹರಳೂ ಸಹ ಆಗಬಹುದು.

3. ದಾಳ, ಅಥವಾ ಚೌಕಾ ಬಾರಾ ಆಟದಲ್ಲಿ ಬಳಸುವಂತೆ ಹುಣಸೇಬೀಜಗಳನ್ನು ಬಳಸಿ ಇದನ್ನು ಆಡಬಹುದು. ದಾಳಕ್ಕಿಂತ ಹುಣಸೇಬೀಜಗಳನ್ನು ಬಳಸುವದು ಹೆಚ್ಚು ಸೂಕ್ತ. ಏಕೆಂದರೆ ದಾಳದಲ್ಲಿ 1 ರಿಂದ 6 ಮಾತ್ರ ಪಡೆಯಬಹುದು. ಅದೇ ಹುಣಿಸೇ

 ಬೀಜಗಳನ್ನು ಬಳಸಿ ಆಡಿದರೆ, 1 ರಿಂದ 6 ಹಾಗೂ ಜೊತೆಗೆ 12 ಸಹ ಪಡೆಯಬಹುದು. ಚೌಕಾ ಬಾರಾ ನಿಯಮದಂತೆ 4, 6, ಹಾಗೂ 12 ಪಡೆದಾಗ ಹೆಚ್ಚುವರಿಯಾಗಿ ಮತ್ತೊಮ್ಮೆ ಅವಕಾಶ ಪಡೆದು ಮತ್ತಷ್ಟು ಚೌಕಕ್ಕೆ ಸಂಖ್ಯೆ ಪಡೆಯಬಹುದು.

 ಬೇಗೆನೆ ಆಟ ಮುಗಿಸಬಹುದು. ಇದರಿಂದ ಆಟದಲ್ಲಿ ಕಾಯಿಗಳು ಬೇಗ ಬೇಗ ಚಲಿಸಿ ಆಸಕ್ತಿ ಮೂಡಿಬರುತ್ತದೆ.

4. ಪ್ರಾರಂಭಿಕ ಆಟಗಾರನು (ಗಣಿತ ಕಲಿಕಾರ್ಥಿ) ಹುಣಸೇಬೀಜಗಳು ಅಥವಾ ದಾಳ ಎಸೆಯಬೇಕು. ಬಂದ ಅಂಕಿಯAತೆ ತನ್ನ ಕಾಯಿಯನ್ನು ಮುಂದಿನ ಚೌಕಕ್ಕೆ ಚಲಿಸಬೇಕು. ಉದಾ: ಪ್ರಾರಂಭಿಕ ಆಟಗಾರ ತನ್ನ ಎಸೆತದಲ್ಲಿ 2 ಪಡೆದನೆಂದು

 ಭಾವಿಸೋಣ. ಈಗ ತನ್ನ ಕಾಯಿಯನ್ನು ಎರಡನೆ ಚೌಕಕ್ಕೆ ಚಲಿಸಬೇಕು. ಅಲ್ಲಿ +5 ಎಂಬ ಸೂಚನೆಯಿದೆ. 2 ಕ್ಕೆ 5 ನ್ನು ಕೂಡಿಸಿದಾಗ (2 + 5 = 7) ಬರುತ್ತದೆ. ಆಗ 2 ನೇ ಚೌಕದಿಂದ ಬಂದ ಮೌಲ್ಯ 7 ನೇ ಮನೆಗೆ ಚಲಿಸಬೇಕು. ಮತ್ತೆ 7 ನೇ

 ಮನೆಯ ಸೂಚನೆ ಪಾಲಿಸದೇ ಮುಂದಿನ ಆಟಗಾರನಿಗೆ ದಾಳ ಅಥವಾ ಬೀಜ ಎಸೆಯಲು ಅವಕಾಶ ನೀಡಬೇಕು.

5. ಈಗ ಎರಡನೇ ಆಟಗಾರನ ಸರದಿ. ಆತ ಹೀಗೆಯೇ ತನ್ನ ಎಸೆತದಲ್ಲಿ 5 ಪಡೆದರೆ, ಆ ಚೌಕಕ್ಕೆ ತನ್ನ ಕಾಯಿ ಚಲಿಸಬೇಕು, ಅಲ್ಲಿಯ ಸೂಚನೆ +5, ಬರುವ ಮೌಲ್ಯ 5 + 5 = 10, ಹತ್ತನೆಯ ಮನೆಗೆ ತನ್ನ ಕಾಯಿಯನ್ನು ಚಲಿಸಿ, ಮುಂದಿನವರಿಗೆ

 ಅವಕಾಶ ನೀಡಬೇಕು. ಈಗ ಎರಡನೇ ಸರದಿಯಲ್ಲಿ ಪ್ರಥಮ ಆಟಗಾರ 3 ಪಡೆದರೆ ಆ ಚೌಕದಿಂದ 10 ನೇ ಮನೆಗೆ ಚಲಿಸಬೇಕು. ಅಲ್ಲಿಯ ಲೆಕ್ಕಾಚಾರ +0 ಆಗಿದೆ. 10+0 = 10, ಅಂದರೆ ತನ್ನ ಕಾಯಿಯನ್ನು ಬಂದ ಉತ್ತರದ ಚೌಕ, 10 ನೇ

 ಚೌಕದಲ್ಲಿಯೇ ಇರಿಸಬೇಕು. ಹೀಗೆಯೇ ಬಂದ ಫಲಿತಾಂಶದAತೆ ಹಿಂದಕ್ಕೂ, ಮುಂದಕ್ಕೂ ಚಲಿಸುತ್ತಾ ಆಟ ಮುಂದುವರೆಯಿಸಬೇಕು.

6. ಮಹತ್ವದ ಸೂಚನೆಯೆಂದರೆ ಒಮ್ಮೆ ಒಂದು ಮನೆಗೆ ಚಲಿಸಿ ಬಂದ ಉತ್ತರದಂತೆ ಹೆಚ್ಚುವರಿಯಾಗಿ ಹಿಂದಕ್ಕೂ ಮುಂದಕ್ಕೂ ಚಲಿಸಿದ ಮೇಲೆ ಮತ್ತೆ ಚಲಿಸಬೇಕಾಗಿಲ್ಲ. ಹೀಗೆ ಆಟ ಮುಂದುವರೆಯಿಸಬೇಕು. ಆಯಾ ಚೌಕದ ಲೆಕ್ಕಾಚಾರದ ಉತ್ತರದಂತೆ ಹಿಂದಕ್ಕೂ, ಮುಂದಕ್ಕೂ ಚಲಿಸಿ, ಯಾರು ಮೊದಲು ಕೊನೆಯ ಚೌಕ ಅಂದರೆ 100 ನೇ ಚೌಕ ತಲುಪುತ್ತಾರೋ ಅವರು ಗೆದ್ದಂತೆ!


ಪರಿಕಲ್ಪನೆ, ರಚನೆ, ವಿನ್ಯಾಸ:

ಶ್ರೀ ರಾಜಶೇಖರಯ್ಯ ಹಿರೇಮಠ, ಶಿಕ್ಷಕರು ಸರಕಾರಿ ಪ್ರೌಢಶಾಲೆ ದೇವನಪಲ್ಲಿ

ತಾ|| ಜಿ|| ರಾಯಚೂರು, (ಮೊ) 94495 11338.


ಪ್ರೇರಣೆ ಹಾಗೂ ಮಾರ್ಗದರ್ಶನ:

ಶ್ರೀಯುತ ಬಸವರಾಜ ಪಾಟೀಲ ಸೇಡಂ, ಮಾನ್ಯ ಪ್ರವರ್ತಕರು, ವಿಕಾಸ ಅಕಾಡೆಮಿ, ಕಲಬುರಗಿ.

ಶ್ರೀಯುತ ಯು. ಭೀಮ್‌ರಾವ್, ಮಾರ್ಗದರ್ಶಕರು, ವಿಕಾಸ ಅಕಾಡೆಮಿ, ಕಲಬುರಗಿ.


0 comments:

Post a Comment